ಕಳೆದ ಕೆಲವು ತಿಂಗಳುಗಳಲ್ಲಿ ChatGPT ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಜನ ಕೂಡ ತುಂಬಾ ಇಷ್ಟಪಟ್ಟಿದ್ದಾರೆ. Microsoft ನ OpenAI ಅಭಿವೃದ್ಧಿಪಡಿಸಿದ Artificial intelligence ಆಧಾರಿತ ChatBot ChatGPT ಯನ್ನು ನವೆಂಬರ್ 2022 ರಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದಾಗಿನಿಂದ ಸಾಕಷ್ಟು ವೈರಲ್ ಆಗಿದೆ. ಚಾಟ್‌ಬಾಟ್ ಮಾನವ ತರಹದ ಉತ್ತರಗಳನ್ನು ನೀಡಬಹುದು ಮತ್ತು ಪ್ರಬಂಧಗಳನ್ನು ಸಹ ಬರೆಯಬಹುದು. ಪ್ರಸ್ತುತ ಸುದ್ದಿ ಬರುತ್ತಿದೆ Google ಕೂಡ ತನ್ನ AI ಆಧರಿತ ChatBot ತರಲಿದೆ, ಅದಕ್ಕೆ ಬಾರ್ಡ್ (Bard) ಎಂದು ಹೆಸರಿಡಲಾಗಿದೆ. ಬನ್ನಿ ಇದರ ಬಗ್ಗೆ ವಿಸ್ತಾರದಿಂದ ತಿಳಿಯೋಣ.
- ಕಳೆದ ಕೆಲವು ದಿನಗಳಿಂದ Tech ಜಗತ್ತಿನಲ್ಲಿ ChatGPT ಯ ಜೈ ಜೈಕಾರ ನಡೆದಿದೆ, ಹಾಗಾದರೆ Google ಹೇಗೆ ಹಿಂದು ಒಡಿಯಬಹುದು, ChatGPT ಗೆ ಟಕ್ಕರ್ ಕೊಡಲು Google ತನ್ನ ಹೊಸ AI ಆಧಾರಿತ ChatBot ಅನ್ನು ಪರಿಚಯಿಸುವ ಕುರಿತು ಮಾತನಾಡಿದೆ. Google ನ CEO ಸುಂದರ್ ಪಿಚೈ ಅವರು ಒಂದು Blog ಗಿನ ಮಾಧ್ಯಮದಿಂದ ಈ ಮಾಹಿತಿ ನೀಡಿದ್ದಾರೆ. ಇದಕ್ಕೆ Brad ಎಂದು ಹೆಸರು ಕೊಟ್ಟಿದ್ದಾರೆ.
Google ಒಂದು ಹೊಸ ಚಾಟ್ ಅನ್ನು ತರುತಿದೆ.
- Google ಪೇರೆಂಟಿನ ಕಂಪನಿ Alphabet ತನ್ನ ಸರ್ಚ್ ಇಂಜಿನ್ ಜೊತೆಗೆ ಡೆವಲಪರ್‌ಗಳು ಮತ್ತು AI ಗಾಗಿ ಚಾಟ್‌ಬಾಟ್ ಸೇವೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ, ಅದು ತಂತ್ರಜ್ಞಾನದಲ್ಲಿ ಹೊಸ ಬದಲಾವಣೆಯೊಂದಿಗೆ Microsoft ನ ChatBot ಗೆ ಠಕ್ಕರ್ ಕೊಡುತ್ತದೆ.
- ಸೋಮವಾರ, Google – ಆಲ್ಫಾಬೆಟ್ CEO ಸುಂದರ್ ಪಿಚೈ ಅವರು Bard ಎಂಬ AI ಆಧಾರಿತ ChatBot ಅನ್ನು ತರುತ್ತಿದ್ದಾರೆ ಎಂದು Blog ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Microsoft ನ ಕಂಪನಿ OpenAI ನವೆಂಬರ್ ಅಂತ್ಯದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ, ಆದರೆ ಈಗ ಕಂಪನಿಯು US ಬಳಕೆದಾರರಿಗೆ $20 (ಸುಮಾರು ರೂ. 1,600) Subscription ಶುಲ್ಕದಲ್ಲಿ ChatGPT Plus➕ ಸೇವೆಗಳನ್ನು ಪ್ರಾರಂಭಿಸಿದೆ.
ಇದು ಸಂವಾದಾತ್ಮಕ AI ಸೇವೆಯಾಗಿದೆ ಮತ್ತು ಬಳಕೆದಾರರಿಂದ Test feedback ಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ನಂತರ ಮುಂಬರುವ ವಾರಗಳಲ್ಲಿ ಸಾರ್ವಜನಿಕ ಬಿಡುಗಡೆ ಮಾಡಲಾಗುವುದು.
Bard ಈ ಮಾಡೆಲ್ ಮೇಲೆ ಕೆಲಸ ಮಾಡುತ್ತದೆ.
- ಹೊಸ ಸಂವಾದಾತ್ಮಕ AI ಸೇವೆ ಬಾರ್ಡ್ LaMDA – “Language Model for Dialogue Applications” (ಸಂಭಾಷಣೆ ಅಪ್ಲಿಕೇಶನ್‌ಗಳಿಗಾಗಿ ಭಾಷಾ ಮಾದರಿ) ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸುಂದರ್ ಪಿಚೈ ತಮ್ಮ Blog ನಲ್ಲಿ ಬಹಿರಂಗಪಡಿಸಿದ್ದಾರೆ.
- ಕಂಪನಿಯು ಆರಂಭದಲ್ಲಿ LaMDA ಯ ಹಗುರವಾದ ಮಾದರಿಯ ಆವೃತ್ತಿಯೊಂದಿಗೆ ಪರೀಕ್ಷಕರಿಗೆ AI ವ್ಯವಸ್ಥೆಯನ್ನು ರೂಲ್ ಔಟ್ ಮಾಡುತ್ತಿದೆ (ಹೊರತರುತಿದೆ).
- ಭವಿಷ್ಯದ ಅಪ್ಲಿಕೇಶನ್‌ಗಳಿಗಾಗಿ AI ವ್ಯವಸ್ಥೆಯನ್ನು ಸುಧಾರಿಸಲು ಪ್ರತಿಕ್ರಿಯೆಯನ್ನು ಸಂಗ್ರಹಿಸುವುದರ ಮೇಲೆ ಕೇಂದ್ರೀಕರಿಸಲಾಗುತ್ತದೆ.
Bard ChatGPT ಗೆ ಠಕ್ಕರ್ ಕೊಡುತ್ತದೆ .
Google ನ ಬಾರ್ಡ್ Microsoft ಕಂಪನಿ OpenAI ನ ChatGPT ಯೊಂದಿಗೆ ಠಕ್ಕರ್ ಕೊಡಬಹುದು. ಟಿಕ್‌ಟಾಕ್(TikTok) ಮತ್ತು ಇನ್‌ಸ್ಟಾಗ್ರಾಮ್ (Instagram) ಅನ್ನು ಹಿಂದಿಕ್ಕಿ ಇತಿಹಾಸದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಅಪ್ಲಿಕೇಶನ್ ಆಗಲು ChatGPT ಸುದ್ದಿಯಲ್ಲಿದೆ. ChatGPT ಪ್ರಾರಂಭವಾದ ಎರಡು ತಿಂಗಳ ನಂತರ, ಜನವರಿಯಲ್ಲಿ 100 ಮಿಲಿಯನ್ monthly active users ಇರುವ ಅನುಮಾನ ಇದೆ.
ChatGPT ಹೇಗೆ ಕೆಲಸ ಮಾಡುತ್ತದೆ?
ChatGPT ನಿಮ್ಮ ಅಗತ್ಯಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೊಂದಿದೆ (ನೀವು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ). ಇದು ನಿಮಗಾಗಿ ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯಬಹುದು, ಹಾಸ್ಯ ಮತ್ತು ಕವನಗಳನ್ನು ಸಹ ಬರೆಯಬಹುದು.
ChatGPT ಯ ಬಗೆ ಇನ್ನಷ್ಟು ಓದಿ
Read more from Wikipedia https://en.m.wikipedia.org/wiki/Google_AI
ಈ ಮಾಹಿತಿ ನಿಮಗೆ ಹೇಗೆ ಅನಿಸುತ್ತದೆ ಎಂಬುವುದು, ದಯವಿಟ್ಟು Comment ನಲ್ಲಿ ತಿಳಿಸಿ.
ಇದೇ ರೀತಿ ನೀವು ಯಾವುದೇ ವಿಷಯದ ಮೇಲೆ ಮಾಹಿತಿ ಬಯಸಿದರೆ ಅದನ್ನು ಕೂಡ ಕಮೆಂಟ್ನಲ್ಲಿ ತಿಳಿಸಿರಿ, ನಾವು ಅದನ್ನು ಆದಷ್ಟು ಬೇಗ ನಿಮ್ಮನ್ನು ತಲುಪಿಸಲು ಪ್ರಯತ್ನಿಸುತ್ತೇವೆ.